ಐದನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವoyCis od all Hk ht E 1231h Ss s_ab G 50e TFf
ಭಾರತೀಯ ಚಿತ್ರರಂಗದ ನೂರು ವರ್ಷಗಳ ಭವ್ಯ ಚರಿತ್ರೆಯನ್ನು ಮೆಲುಕು ಹಾಕುವುದರೊಂದಿಗೆ ಗುರುವಾರ ಐದನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ, ಡಿಸೆಂಬರ್ ೨೦,೨೦೧೨ರಂದು ಆರಂಭವಾಯಿತು. [೧]
ರಾಜಾ ಹರಿಶ್ಚಂದ್ರ, ಆಲಂ ಆರಾ, ಮುಘಲ್ ಎ ಆಜಂ,ಪ್ಯಾಸಾ, ಕನ್ನಡದ ಅಣ್ಣತಂಗಿ, ತೆಲುಗಿನ ಮಾಯಾಬಜಾರ್ ಚಿತ್ರಗಳ ದೃಶ್ಯಾವಳಿಗಳನ್ನು ಪ್ರದರ್ಶಿಸುವ ಜೊತೆಗೆ ದಿಲೀಪ್ ಕುಮಾರ್, ಅಮಿತಾಭ್ ಬಚ್ಚನ್, ರಾಜ್ ಕಪೂರ್, ಸೈಗಲ್, ವಿ.ಕೆ. ಮೂರ್ತಿ ಹಾಗೂ ಗಿರೀಶ್ ಕಾಸರವಳ್ಳಿ ಅವರ ಕೊಡುಗೆಗಳನ್ನು ಸ್ಮರಿಸಲಾಯಿತು. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸಿನಿಮೋತ್ಸವಕ್ಕೆ ಚಾಲನೆ ನೀಡಿದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಿ. ವಿಜಯಕುಮಾರ್, ಉತ್ಸವದ ಕಲಾತ್ಮಕ ನಿರ್ದೇಶಕ ಎಚ್. ಎನ್. ನರಹರಿ ರಾವ್, ನಟ ವಿ. ರವಿಚಂದ್ರನ್ ತೆಲುಗು ಚಿತ್ರರಂಗದ ಹಿರಿಯ ನಿರ್ದೇಶಕ ಕೆ. ವಿಶ್ವನಾಥ್ ಇತರರು ಮಾತನಾಡಿದರು. ಜಪಾನಿ ಚಿತ್ರಗಳ ನಿರ್ದೇಶಕ ಮಾಸಾಹಿರೋ ಕೊಬಯಾಷಿ ಕೂಡ ಉಪಸ್ತಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವನಾಥ್ `ನನ್ನ ಶಂಕರಾಭರಣಂ, ಸ್ವಾತಿಮುತ್ಯಂ, ಸಾಗರ ಸಂಗಮಂನಂಥ ಚಿತ್ರಗಳನ್ನು ಕನ್ನಡನಾಡು ಕೂಡ ಪ್ರೋತ್ಸಾಹಿಸಿದೆ. ಅಂಥ ಚಿತ್ರಗಳು ಹೊರಬರಲು ಯಾವುದೋ ಮಾನವಾತೀತ ಶಕ್ತಿ ಕಾರಣ ಅನ್ನಿಸುತ್ತಿದೆ. ಹೊಸ ಹೊಸ ತಂತ್ರಜ್ಞಾನಗಳು ಚಿತ್ರರಂಗಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ನಾನಿನ್ನೂ ಶಿಶುವಿಹಾರದ ವಿದ್ಯಾರ್ಥಿ ಎಂಬ ಭಾವನೆ ಮೂಡುತ್ತಿದೆ' ಎಂದರು.
ಪುಸ್ತಕ ಮತ್ತು ಡಿವಿಡಿ ಬಿಡುಗಡೆ[ಬದಲಾಯಿಸಿ]
ವಾರ್ತಾ ಇಲಾಖೆ ಪ್ರಕಟಿಸಿರುವ ಕನ್ನಡ ಸಿನಿಮಾ ಬೆಳ್ಳಿ ಬಿಂಬ ಪುಸ್ತಕ ಹಾಗೂ ನಿರ್ದೇಶಕಿ ಮಾಯಾರಾವ್ ಅವರ ಕನ್ನಡ ಜೀವಸ್ವರ ಡಿವಿಡಿಗಳನ್ನು ಬಿಡುಗಡೆ ಮಾಡಲಾಯಿತು.
ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ ಅನೂರಾಧ ಸ್ವಾಗತಿಸಿದರು. ಸಂಘಟನಾ ಸಮಿತಿ ಅಧ್ಯಕ್ಷರೂ ಆದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಬಿ. ಬಸವರಾಜು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮೇಯರ್ ಡಿ. ವೆಂಕಟೇಶಮೂರ್ತಿ, ಶಾಸಕ ದಿನೇಶ್ ಗುಂಡೂರಾವ್, ಭಾರತೀಯ ಚಲನಚಿತ್ರ ಒಕ್ಕೂಟದ ಉಪಾಧ್ಯಕ್ಷ ಎ.ಆರ್. ರಾಜು, ಚಲನಚಿತ್ರ ಕಲಾವಿದರ ಸಂಘದ ಕಾರ್ಯದರ್ಶಿ ರಾಕ್‌ಲೈನ್ ವೆಂಕಟೇಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಿನಿಮೋತ್ಸವದಲ್ಲಿ ಭಾಗವಹಿಸಿದ ಚಿತ್ರಗಳು[ಬದಲಾಯಿಸಿ]
- ಐದನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶಿಸಲ್ಪಟ್ಟ ಚಿತ್ರಗಳು
ಬಾಹ್ಯಕೊಂಡಿಗಳು[ಬದಲಾಯಿಸಿ]
- ↑ ಐದನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭ ಭಾರತೀಯ ಸಿನಿಮಾ ಸುವರ್ಣ ಕ್ಷಣಗಳ ಸ್ಮರಣೆ, ಡಿಸೆಂಬರ್ ೨೧, ೨೦೧೨.